Ration card Correction and new ration card information 2025

New Ration Card and correction Ration card in Karnataka 2025

WhatsApp Channel Join Now
Telegram Group Join Now
ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಪಡಿತರ ಚೀಟಿ ಮಾಹಿತಿ

ಹಲೋ ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಯಾರಿಗೆಲ್ಲ ಅವಶ್ಯಕತೆ ಇದೆಯೋ ಅಂತವರಿಗೆ ಎಲ್ಲರಿಗೂ ಕೂಡ ಒಂದು ಸಂತೋಷದ ಸುದ್ದಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

Ration card Correction and new ration card information 2025

 ತುಂಬಾ ಸರಳವಾದ ಹಾಗೂ ಸುಲಭವಾಗಿ ಅರ್ಥೈಸಿಕೊಳ್ಳುವಂತಹ ರೀತಿಯಲ್ಲಿ ರೇಷನ್ ಕಾರ್ಡ್ ತಿದ್ದುಪಡಿಯ ಬಗ್ಗೆ ಮಾಹಿತಿಯನ್ನು ಒದಗಿಸಿದ್ದೇವೆ. ಇದೇ ತರ ಯಾವುದೇ ಒಂದು ಹೊಸದಾದ ಕನ್ನಡ ಸುದ್ದಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ರೇಷನ್ ಕಾರ್ಡ್ ತಿದ್ದುಪಡಿ

ಯಾರೆಲ್ಲ ರೇಷನ್ ಕಾರ್ಡ್ ತಿದ್ದುಪಡಿ ಮಾಡಬೇಕೆಂದಿದ್ದೀರೊ ಅಂತವರಿಗೆ ಎಲ್ಲರಿಗೂ ಕೂಡ ಇದೇ ಜನವರಿ ತಿಂಗಳು 1ನೇ ತಾರೀಕಿನಿಂದ 31 ನೇ ತಾರೀಕಿನವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ರೇಷನ್ ಕಾರ್ಡ್ ತಿದ್ದುಪಡಿಗೆ ನಮ್ಮ ಕರ್ನಾಟಕ ಸರ್ಕಾರವು ಕಾಲಾವಕಾಶಗಳನ್ನು ಕೊಟ್ಟಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ

ರೇಷನ್ ಕಾರ್ಡ್ ತಿದ್ದುಪಡಿಯ ಸಂದರ್ಭದಲ್ಲಿ ಯಾವ ಯಾವ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು.

ರೇಷನ್ ಕಾರ್ಡಿನಲ್ಲಿ ಯಾವೆಲ್ಲಾ ತಿದ್ದುಪಡಿ ಮಾಡಿಕೊಳ್ಳಬಹುದು. ಎಂದು ಹೇಳುವುದಾದರೆ,

1. ನಿಮ್ಮ ರೇಷನ್ ಕಾರ್ಡ್ ಇಂದ ಸದಸ್ಯರನ್ನು ತೆಗೆದುಹಾಕಲು ಹಾಗೂ ಸೇರಿಸಿಕೊಳ್ಳಲು ಬಹುದು.

2. ಯಾವುದೇ ಒಂದು ಸದಸ್ಯರ ಹೆಸರು ತಪ್ಪಾಗಿದ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತೆಯೇ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಿಕೊಳ್ಳಬಹುದು. 

3. ಕುಟುಂಬ ಯಜಮಾನಿಯನ್ನು ಬದಲಾಯಿಸಿಕೊಳ್ಳಬಹುದು ಹಾಗೂ ಕುಟುಂಬ ಯಜಮಾನ ಹಳ್ಳಿ ಇರುವಂತೆಯೇ ವಿಳಾಸವನ್ನು ಕೂಡ ಬದಲಾಯಿಸಿಕೊಳ್ಳಬಹುದು. 

4. ನಿಮ್ಮ ರೇಷನ್ ಡಿಪೋವನ್ನು ಬದಲಾಯಿಸಿಕೊಳ್ಳಬಹುದು. 

5. ನಿಮ್ಮ ಭಾವಚಿತ್ರವನ್ನು ಆಧಾರ್ ಕಾರ್ಡ್ ನಲ್ಲಿ ಇರುವಂತೆಯೇ ಅಪ್ಡೇಟ್ ಮಾಡಿಕೊಳ್ಳಬಹುದು.

.ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವಂತಹ ದಾಖಲೆಗಳು.

1. ಸದಸ್ಯರನ್ನು ಸೇರಿಸುವಾಗ ಅವರಿಗೆ ಆರು ವಯಸ್ಸಿಗಿಂತ ಹೆಚ್ಚಿದ್ದರೆ ಆದಾಯ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವಂತಹ ಮೊಬೈಲ್ ಫೋನ್ ತೆಗೆದುಕೊಂಡು ಹೋಗಬೇಕು. 

2. ಆರು ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳಿಗೆ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ಫೋನ್ ಅದರ ಜೊತೆಯಲ್ಲಿ ಮಗುವಿನ ಜನನ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗಬೇಕು. 

3. ರೇಷನ್ ಕಾರ್ಡ್ ನಿಂದ ತೆಗೆದುಹಾಕಲು ರೇಷನ್ ಕಾರ್ಡ್ ನಲ್ಲಿರುವ ಯಾರಾದರೂ ಒಬ್ಬರಾ ಹೆಬ್ಬರಳಿನ ಗುರುತಿನ ಮುಖಾಂತರ ತೆಗೆದುಹಾಕಬಹುದು. 

ಹೊಸ ರೇಷನ್ ಕಾರ್ಡ್ ಮಾಹಿತಿ.

ಇದರ ಜೊತೆಯಲ್ಲಿ ಹೊಸ ರೇಷನ್ ಕಾರ್ಡ್ ಕೂಡ ಮಾಡಿಸಿಕೊಳ್ಳಲು ಕಾಲಾವಕಾಶಗಳನ್ನು ಈ ತಿದ್ದುಪಡಿಯ ಸಮಯದ ಮಧ್ಯದಲ್ಲಿ ಬಿಡುವ ಸಾಧ್ಯತೆ ಇದೆ ಎಂದು ವರದಿ ಸಿಕ್ಕಿದೆ, ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. 

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ನಿಮ್ಮ ಹತ್ತಿರದ ಗ್ರಾಮ ಒನ್  ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಧನ್ಯವಾದಗಳು.

ಮೇಲೆ ಓದಿದಂತಹ  ಸುದ್ದಿಯನ್ನು ವಿಡಿಯೋದ ಮುಖಾಂತರ ನೋಡಲು ಕೆಳಗೆ ಕಾಣುವಂತಹ ವಿಡಿಯೋ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಿರಿ.

× Click here to WhatsApp