New ration card and Annabhagya Yojana money

New ration card and Annabhagya Yojana money

WhatsApp Channel Join Now
Telegram Group Join Now
New Ration Card

New ration card ಅನ್ನಭಾಗ್ಯ ಯೋಜನೆಯ ಹಣ

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ration card ಅನ್ನಭಾಗ್ಯ ಯೋಜನೆಯ ಹಣ 3-4 ತಿಂಗಳಿಂದ ಬಿಡುಗಡೆ ಆಗಿಲ್ಲ, ಇದರ ಕಾರಣವನ್ನು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯ ತನಕ ಓದಿ ಮತ್ತು ಇದೇ ತರ ಯಾವುದೇ ಒಂದು ಹೊಸ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಧನ್ಯವಾದಗಳು.

ರೇಷನ್ ಕಾರ್ಡ್ ( new ration card) ನ ಮರು ಪರಿಶೀಲನೆ

ಸ್ನೇಹಿತರೆ ರೇಷನ್ ಕಾರ್ಡ್ ಗೆ ಬರುತ್ತಿದ್ದಂತಹ ಅಕ್ಕಿ ಹಣ ಸುಮಾರು 3-4 ತಿಂಗಳಿಂದ ಬಿಡುಗಡೆ ಆಗಿಲ್ಲ, ಕಾರಣವೇನೆಂದರೆ ಸುಮಾರು ಜನ BPL ಮತ್ತು ಅಂತಿಯೋದಯ ರೇಷನ್ ಕಾರ್ಡ್ (new ration card ) ಗಳನ್ನು ಸುಳ್ಳು ಮಾಹಿತಿಯನ್ನು ನೀಡಿ ಪಡೆದುಕೊಂಡಿದ್ದರು ಅದನ್ನು ಕಂಡುಹಿಡಿದ ಸರ್ಕಾರವು ಸುಮಾರು ಜನರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದ್ದರು.

ಇದರಿಂದ ಹಲವರು ತೊಂದರೆಗೆ ಒಳಗಾದರೂ ಮತ್ತು ಅವರಿಗೆ ರೇಷನ್ ಕೂಡ ಸಿಗಲಿಲ್ಲ. ಸಾವಿರಾರು ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗಿದ್ದು ಇದರಿಂದ ಕೆಲವೊಂದು ಬಡವರಿಗೆ ಕೂಡ ತೊಂದರೆ ಉಂಟಾಯಿತು, ಮತ್ತೆ ಈ ಒಂದು ರೇಷನ್ ಕಾರ್ಡ್ ನ ಮರು ಪರಿಶೀಲನೆ ಮಾಡಿ ರದ್ದಾದಂತಹ ರೇಷನ್ ಕಾರ್ಡನ್ನು ಮತ್ತೆ ಅವರಿಗೆ ಒದಗಿಸಿ ಕೊಟ್ಟಿತ್ತು ಸರ್ಕಾರ (New ration card)

ನಿಮ್ಮ ರೇಷನ್ ಕಾರ್ಡನ್ನು ಕಳೆದುಕೊಳ್ಳಬೇಡಿ!

ಸ್ನೇಹಿತರೆ ಪ್ರತಿಯೊಂದು ತಿಂಗಳು ಕೂಡ ರೇಷನ್ ಪಡೆದುಕೊಳ್ಳುವಾಗ ಹೆಬ್ಬೆಟ್ಟಿನ ಮುಖಾಂತರ ಹಾಗೂ ಒಟಿಪಿ (OTP) ಮುಖಾಂತರ ರೇಷನ್ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಹಲವಾರು ಕಾರಣಾಂತರಗಳಿಂದ ರೇಷನ್ ಕಾರ್ಡಿಗೆ ಬರುವಂತಹ ಪಡಿತರವನ್ನು ಪಡೆದುಕೊಳ್ಳಲು ಪ್ರತಿ ತಿಂಗಳು ಕುಟುಂಬದ ಯಜಮಾನಿ ಅಥವಾ ಆ ರೇಷನ್ ಕಾರ್ಡ್ ನಲ್ಲಿರುವಂತಹ ಯಾರಾದರೂ ಒಬ್ಬರು ಕಡ್ಡಾಯವಾಗಿ ಹೆಬ್ಬಟ್ಟನ್ನು ಇಟ್ಟು ರೇಷನ್ ಪಡೆದುಕೊಳ್ಳುವಂತೆ ಸರ್ಕಾರ ಆದೇಶ ನೀಡಿದೆ.

ರೇಷನ್ ವಿತರಣೆ ಇರುವುದಿಲ್ಲ

ಯಾವುದೇ ಕಾರಣಕ್ಕೂ ಓ ಟಿ ಪಿ (OTP) ಮುಖಾಂತರ ಇನ್ನು ಮುಂದೆ ರೇಷನ್ ವಿತರಣೆ ಇರುವುದಿಲ್ಲ ಎಂದು ಎಚ್ಚರಿಕೆಯೂ ಕೂಡ ನೀಡಿದೆ. ಏಕೆಂದರೆ ತುಂಬಾ ಜನರು ಬೇರೆ ಊರಿನಲ್ಲಿ ಇದ್ದುಕೊಂಡು ರೇಷನ್ ಅನ್ನು ಓಟಿಪಿ ಮುಖಾಂತರ ಪಡೆದು ಬೇರೆಯವರಿಗೆ ಮಾರುತಿದ್ದಾರೆ ಎಂಬ ಸುದ್ದಿ ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದಾಗಿ ಸರ್ಕಾರ ಕಟ್ಟುನಿಟ್ಟಾದ ಕ್ರಮ ಕೈಗೊಂಡಿರುವುದು ಅಲ್ಲದೆ ಓಟಿಪಿ ಮುಖಾಂತರ ಪಡೆದುಕೊಳ್ಳುವ ಅವಕಾಶವನ್ನು ರದ್ದು ಮಾಡಿದೆ (New ration card)

ಈ ಕೆ ವೈ ಸಿ (EKYC) ಮಾಡಿಲ್ಲ ಅಂದರೆ ನಿಮ್ಮ ರೇಷನ್ ಕಾರ್ಡ್(Ration card) ನಿಂದ ನಿಮ್ಮ ಹೆಸರು ರಿಮೂವ್ ಆಗುತ್ತೆ!

ಸ್ನೇಹಿತರೆ ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ ಯಾರೆಲ್ಲಾ ಇನ್ನೂ ರೇಷನ್ ಕಾರ್ಡ್ ಗೆ ಹೆಬ್ಬಟ್ಟನ್ನು ಇಟ್ಟು ಈ ಕೆ ವೈಸಿ (EKYC) ಮಾಡಿಕೊಂಡಿಲ್ಲವೋ ಅಂತವರು ಕಡ್ಡಾಯವಾಗಿ ಇದೆ 2025 ಜನವರಿ 31ರ ಒಳಗೆ ಈ ಕೆ ವೈಸಿ ಮಾಡಿಕೊಳ್ಳಬೇಕೆಂದು ಸರ್ಕಾರವು ಆದೇಶ ನೀಡಿದೆ. ಪ್ರತಿಯೊಬ್ಬರು ಕೂಡ ತಮ್ಮ ಹೆಬ್ಬಟ್ಟನ್ನು ಇಟ್ಟು ಈ ಕೆ ವೈಸಿ ಮಾಡಿಕೊಳ್ಳಬೇಕು.

ಒಂದು ವೇಳೆ ನೀವು ಹಾಗೆ ಮಾಡಿಕೊಳ್ಳಬೇಕು ಪಕ್ಷದಲ್ಲಿ ನಿಮ್ಮ ಹೆಸರು ನಿಮ್ಮ ರೇಷನ್ ಕಾರ್ಡ್ ನಿಂದ ರಿಮೂವ್ ಆಗುವಂತಹ ಸಾಧ್ಯತೆಗಳು ಹೆಚ್ಚಾಗಿವೆ. ಅದರಿಂದ ಯಾರೆಲ್ಲ ಇನ್ನೂ ಈಕೆಬೈಸಿ ಮಾಡಿಕೊಂಡಿಲ್ಲವೂ ಅಂತವರೆಲ್ಲ ಎಚ್ಚೆದ್ದು ಈಕೆ ವಿಸಿಯನ್ನು ಮಾಡಿಕೊಳ್ಳಿ.

ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ

ಈ ಒಂದು ಕೆಲವು ಸಮಸ್ಯೆಗಳಿಂದಾಗಿ ಕಳೆದ ನಾಲ್ಕು ತಿಂಗಳಿಂದ ಅನ್ನಭಾಗ್ಯ ಯೋಜನೆಯ ಹಣ ವನ್ನು ಸರಿಯಾಗಿ ಜನರಿಗೆ ಕೊಡಲು ಅಸಾಧ್ಯವಾಗಿತ್ತು ಮತ್ತು ಈಗ ಜನವರಿ 25ರ ಒಳಗೆ ಎಲ್ಲರಿಗೂ ಕೂಡ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬರುತ್ತೆ ಅಂತ ಕೆಎಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.

ಈ ಮೇಲೆ ಓದಿದಂತಹ ಎಲ್ಲಾ ವಿಷಯವನ್ನು ವಿಡಿಯೋದಲ್ಲಿ ನೋಡಲು ಹಾಗೂ ಕೇಳಿಸಿಕೊಳ್ಳಲು ಕೆಳಗೆ ಕೊಟ್ಟಿರುವಂತಹ ವಿಡಿಯೋ ಲಿಂಕ್ ಮೇಲೆ ಕ್ಲಿಕ್ ಮಾಡಿ

× Click here to WhatsApp