
ಉಷಾ ಟೈಲರಿಂಗ್ ಕೋರ್ಸ್ ಮತ್ತು ಪ್ರಮಾಣಪತ್ರವನ್ನು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿ | New USHA Tailoring course and certificate opportunity
ಉಷಾ ಟೈಲರಿಂಗ್ ಸರ್ಟಿಫಿಕೇಟ್ (Usha Tailoring Course and Certificate)
ಹಲೋ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ, ಪ್ರತಿಯೊಬ್ಬರು ತಮ್ಮ ಮೊಬೈಲ್ ಮುಖಾಂತರ ಟೈಲರಿಂಗ್ ಕೋರ್ಸ್ ಪಡೆದು ತುಂಬಾ ಸುಲಭವಾಗಿ ಹೇಗೆ ಟೈಲರಿಂಗ್ ಸರ್ಟಿಫಿಕೇಟ್ (Usha Tailoring Course and Certificate) ಅನ್ನು ಪಡೆದುಕೊಳ್ಳುವುದು ಎಂಬುದರ ಬಗ್ಗೆ ತುಂಬಾ ಕ್ಲಿಯರಾಗಿ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ, ಲೇಖನವನ್ನು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದೇ ತರ ಯಾವುದೇ ಒಂದು ಉಪಯೋಗಕರವಾದ ಮಾಹಿತಿಗಳಿಗಾಗಿ Namma Infotech website ಅನ್ನು ಫಾಲೋ ಮಾಡಿ ಪ್ರತಿಯೊಂದು Update ಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.
ಹೊಲಿಗೆ ಯಂತ್ರ ಗಳನ್ನು ಪಡೆದುಕೊಳ್ಳಬೇಕೆಂದರೆ ಈ ಟೈಲರಿಂಗ್ ಸರ್ಟಿಫಿಕೇಟ್ ತುಂಬಾ ಅಗತ್ಯವಾಗಿದೆ
ಇತ್ತೀಚಿನ ದಿನದಲ್ಲಿ ಟೈಲರಿಂಗ್ ಸರ್ಟಿಫಿಕೇಟ್ ಪಡೆದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಏಕೆಂದರೆ ಈ ಟೈಲರಿಂಗ್ ಸರ್ಟಿಫಿಕೇಟ್ ಮುಖಾಂತರ ಸರ್ಕಾರದ ಯೋಜನೆಗಳಿಂದ ಬರುವ ಲಾಭಗಳನ್ನು ಪಡೆದುಕೊಳ್ಳಲು ಅಂದರೆ ಟೈಲರ್ ಗಳಿಗೆ ಸರ್ಕಾರದಿಂದ ಬರುವಂತಹ ಸಹಾಯ ದನ ಹಾಗೂ ಹೊಲಿಗೆ ಯಂತ್ರ ಗಳನ್ನು ಪಡೆದುಕೊಳ್ಳಬೇಕೆಂದರೆ ಈ ಟೈಲರಿಂಗ್ ಸರ್ಟಿಫಿಕೇಟ್ ತುಂಬಾ ಅಗತ್ಯವಾಗಿದೆ. ಯಾವುದೇ ಒಂದು ಸರ್ಕಾರದಿಂದ ಬರುವ ಹೊಲಿಗೆ ಯಂತ್ರಗಳ ಲಾಭವನ್ನು ಪಡೆದುಕೊಳ್ಳಬೇಕೆಂದರೆ ಹಾಗೂ ಸಹಾಯಧನವನ್ನು ಪಡೆದುಕೊಳ್ಳಬೇಕೆಂದರೆ ಈ ಟೈಲರಿಂಗ್ ಸರ್ಟಿಫಿಕೇಟ್ ಯಾರ ಬಳಿ ಇದೆಯೋ ಅಂತವರಿಗೆ ಮಾತ್ರ ಆನ್ಲೈನ್ ನಲ್ಲಿ ಅರ್ಜಿ ಹಾಕುವ ಅವಕಾಶ ಇರುತ್ತೆ.
ಮನೆಯಲ್ಲೇ ಕುಳಿತು ಹೇಗೆ ಟೈಲರಿಂಗ್ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು?
ಈ ಉಷಾ ಸಿಲಾಯಿ ಟೈಲರಿಂಗ್ ಸರ್ಟಿಫಿಕೇಟ್ ಅನ್ನು ಮನೆಯಲ್ಲೇ ಕುಳಿತು ನಾವು ಹೇಗೆ ಪಡೆದುಕೊಳ್ಳಬಹುದು ಅಂದರೆ ಉಷಾ ಕಂಪನಿಯು CSC Centre ಮುಖಾಂತರ ಎಲ್ಲರೂ ಆನ್ಲೈನ್ ನಲ್ಲಿ ಅರ್ಜಿ ಹಾಕುವ ಅವಕಾಶವನ್ನು ನೀಡಿದೆ. ಈ ಆನ್ಲೈನ್ ಅರ್ಜಿಯ ಮುಖಾಂತರ ಪ್ರತಿಯೊಬ್ಬರೂ ಕೂಡ ಉಷಾ ಸಿಲಾಯಿ ಅಪ್ಲಿಕೇಶನ್ ಅನ್ನು Play store ನಿಂದ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ ಅಪ್ಲಿಕೇಶನ್ ನಲ್ಲಿರುವ ಎಲ್ಲಾ ಟೈಲರಿಂಗ್ ಕೋರ್ಸ್ ಗಳ ವಿಡಿಯೋ ನೋಡಿ ತುಂಬಾ ಸುಲಭವಾಗಿ ಟೈಲರಿಂಗ್ ಬಗ್ಗೆ ಕಲಿತು ಟೈಲರಿಂಗ್ ಸರ್ಟಿಫಿಕೇಟ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳ ಬಹುದು.
ಉಷಾ ಟೈಲರಿಂಗ್ ಕೋರ್ಸ್ (Usha Tailoring Course and Certificate) ಗೆ ಆನ್ಲೈನ್ ನಲ್ಲಿ ಅರ್ಜಿ ಹಾಕುವ ಬಗ್ಗೆ?

ಉಷಾ ಟೈಲರಿಂಗ್ ಕೋರ್ಸ್ಗೆ ನೀವು ನಿಮ್ಮ ಹತ್ತಿರದ ಸಿ ಎಸ್ ಸಿ ಸೆಂಟರ್ CSC Centre ಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಇಮೇಲ್ ಐಡಿ ಮೊಬೈಲ್ ನಂಬರ್ ಕೊಟ್ಟು ನೀವು ರಿಜಿಸ್ಟರ್ ಮಾಡಬಹುದು. ಇದಕ್ಕೆ ಇನ್ಯಾವುದೇ ದಾಖಲೆಗಳ ಅಗತ್ಯ ಇರುವುದಿಲ್ಲ. ಯಾವುದೇ ಒಂದು ಹೆಚ್ಚಿನ ಮಟ್ಟದಲ್ಲಿ ಓದಿರಬೇಕು ಎಂಬುದರ ಅಗತ್ಯವಿಲ್ಲ, ನಿಮಗೆ ಸ್ಮಾರ್ಟ್ ಫೋನ್ ಬಳಕೆ ಮಾಡುವುದು ತಿಳಿದಿದ್ದರೆ ಸಾಕು, ಅದರ ಮುಖಾಂತರ ನೀವು ಹೊಸ ಸಿಲಾಯಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಕೋರ್ಸ್ ತೆಗೆದುಕೊಳ್ಳಬಹುದು ಹಾಗೂ ಕೋರ್ಸ್ ಕೊನೆಯಲ್ಲಿ ನಿಮ್ಮ ಮೊಬೈಲ್ ಮುಖಾಂತರ 50 ಅಂಕಗಳ ಪರೀಕ್ಷೆ ಇರುತ್ತೆ ಅದರಲ್ಲಿ 17 ಅಂಕಗಳು ಪಡೆದಿದ್ದರೆ ಸಾಕು. ನಿಮಗೆ ಹೊಸ ಟೈಲರಿಂಗ್ ಸರ್ಟಿಫಿಕೇಟ್ ಸಿಗುತ್ತೆ.
ನಮ್ಮ ಕಡೆಯಿಂದ ಹೊಸ ಟೈಲರಿಂಗ್ ಸರ್ಟಿಫಿಕೇಟ್ (Usha Tailoring Course and Certificate) ನೀವು ಪಡೆದುಕೊಳ್ಳಲು ಏನು ಮಾಡಬೇಕು?
ಒಂದು ವೇಳೆ ನೀವು ನಿಮ್ಮ ಹತ್ತಿರದ CSC Centre ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದಲ್ಲಿ ನಮ್ಮನ್ನು ಸಂಪರ್ಕಿಸಿದರೆ ನಿಮಗೆ ನಾವೇ ಆನ್ಲೈನ್ ನಲ್ಲಿ ಹೊಸ ಸಿಲಾಯಿ ಅಪ್ಲಿಕೇಶನ್ ಅರ್ಜಿ ಹಾಕಿ Yser ID and Password ನಿಮಗೆ ಕೊಡುತ್ತೇವೆ. ಅದರ ಮುಖಾಂತರ ನೀವು ನಿಮ್ಮ ಮೊಬೈಲ್ ನಲ್ಲಿ Play store ನಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಟೈಲರಿಂಗ್ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ. Mob : 9482034473
ಯಾವ ಭಾಷೆಯಲ್ಲಿ ಪರೀಕ್ಷೆ ಇರುತ್ತೆ?
ಉಷಾ ಟೈಲರಿಂಗ್ ಆನ್ಲೈನ್ ನಲ್ಲಿ ಪರೀಕ್ಷೆ ಬರೆಯಲು ನಿಮಗೆ ಇಷ್ಟವಾದ ಭಾಷೆಯನ್ನು ನೀವು ಆಯ್ದುಕೊಳ್ಳುವ ಆಪ್ಷನ್ ಇದೆ, ಅದಕ್ಕೆ ನೀವು ಅರ್ಜಿ ಹಾಕುವ ಮುನ್ನ ನೀವು ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕು ಎಂದು ಇಷ್ಟಪಡುತ್ತೀರೋ ಅದನ್ನು ಅಪ್ಲಿಕೇಶನ್ ಹಾಕುವವರಿಗೆ ತಿಳಿಸಬೇಕು, ಆಗ ಮಾತ್ರ ನಿಮ್ಮ ಪ್ರಿಪೇರ್ಡ್ ಬಾಷೆ ಆಯ್ಕೆ ಮಾಡಲು ಸಾಧ್ಯ. ನಿಮಗೆ ಇಷ್ಟವಾದ ಭಾಷೆಯನ್ನು ಆಯ್ಕೆ ಮಾಡಿ ಪರೀಕ್ಷೆ ಬರೆಯಿರಿ ಪ್ರತಿಯೊಬ್ಬರು ಕೂಡ ನೀವು ಆನ್ಲೈನ್ ಮುಖಾಂತರ ಅರ್ಜಿ ಹಾಕಬಹುದು.
ವಯಸ್ಸಿನ ಮಿತಿ ಮತ್ತು ಅಪ್ಲಿಕೇಶನ್ Fees ಎಷ್ಟು ಇರುತ್ತೆ?
ಸ್ನೇಹಿತರೆ ಉಷಾ ಟೈಲರಿಂಗ್ ತರಬೇತಿಯನ್ನು ಮುಗಿಸಲು ನೀವು ಆನ್ಲೈನ್ ನಲ್ಲಿ ಅರ್ಜಿ ಹಾಕುವ ಮುನ್ನ 499 ರೂ ನೀವು ಅಪ್ಲಿಕೇಶನ್ ಚಾರ್ಜ್ ಗೆ ಕೊಡಬೇಕು ಮತ್ತು ಇದಕ್ಕೆ ಕನಿಷ್ಠ 18 ವರ್ಷ ವಯಸ್ಸಾಗಿದ್ದರೆ ಸಾಕು, ಕೇವಲ ಒಂದು ವಾರದೊಳಗೆ ಎಲ್ಲಾ ತರಬೇತಿಗಳ ವಿಡಿಯೋಗಳನ್ನು ನೋಡಿ ನೀವು ಪರೀಕ್ಷೆ ಬರದು ಉಷಾ ಟೈಲರಿಂಗ್ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು All The Best.
ಇದೇ ತರ ಸರ್ಕಾರದ ಎಲ್ಲಾ ಪ್ರಯೋಜನಕರವಾದ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಮೇಲೆ ಓದಿದಂತಹ ಎಲ್ಲಾ ಮಾಹಿತಿಗಳನ್ನು ನೀವು ವಿಡಿಯೋದ ರೂಪದಲ್ಲಿ ನೋಡಲು ಈ ಕೆಳಗೆ ಕೊಟ್ಟಿರುವ ಯೂಟ್ಯೂಬ್ ವಿಡಿಯೋವನ್ನು ಕ್ಲಿಕ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಧನ್ಯವಾದಗಳು.