
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ | Today is the only day | New ration card apply
New ration card apply
ಹಲೋ ಸ್ನೇಹಿತರೆ ಹೊಸ ರೇಷನ್ ಕಾರ್ಡ್ (New ration card) ಮಾಡಲು ತುಂಬಾ ದಿನದಿಂದ ನೀವು ಕಾಯುತ್ತಿದ್ದೀರಾ? ಹಾಗಾದರೆ ಈ ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳಬೇಡಿ. ಇದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ, ಸಂಪೂರ್ಣವಾಗಿ ಮಾಹಿತಿಯನ್ನು ಓದಿ ಖಂಡಿತ ನಿಮಗೆ ಪ್ರಯೋಜನಕರವಾಗಿ ಇರಬಹುದು. ಇದೇ ತರ ಎಲ್ಲಾ ಸರ್ಕಾರದ ಮಾಹಿತಿಗಳಿಗಾಗಿ ಹಾಗೂ ಪ್ರಯೋಜನಕರವಾದ ಯೋಜನೆಗಳಿಗಾಗಿ ಈ Namma Infotech ವೆಬ್ಸೈಟ್ ಅನ್ನು ಫಾಲೋ ಮಾಡಿ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.
ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದೀರಾ?
ಸ್ನೇಹಿತರೆ ಹೊಸ ರೇಷನ್ ಕಾರ್ಡ್ ಮಾಡಲು ಸುಮಾರು ದಿನದಿಂದ ಹಳವರು ಕಾಯುತ್ತಾ ಇದ್ದೀರಿ, ಈ ತಿಂಗಳ ಕೊನೆಯವರೆಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಿದ ಸರ್ಕಾರ ಈ ಒಂದು ದಿನ ಮಾತ್ರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶವನ್ನು ಮಾಡಿಕೊಟ್ಟಿದೆ. ಯಾರಲ್ಲ ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದೀರಾ ಅಂತವರು ಈ ಕೆಳಗಿನ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಕರ್ನಾಟಕ ಒನ್ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ.
ಸ್ನೇಹಿತರೆ ಹೊಸ ರೇಷನ್ ಕಾರ್ಡಿಗೆ (New ration card) ಅರ್ಜಿ ಹಾಕಲು ನಿಮ್ಮ ಬಳಿ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಹಾಗೂ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರನ್ನು ತೆಗೆದುಕೊಂಡು ಹೋಗಿ, ಆದಷ್ಟು ಈ ಒಂದು ಹೊಸ ರೇಷನ್ ಕಾರ್ಡ್ ಸ್ಕೀಮ್ ನಲ್ಲಿ ಯಾರಿಗೂ ಓ ಟಿ ಪಿ (OTP) ಮುಖಾಂತರ ಅರ್ಜಿ ಹಾಕಲು ಅವಕಾಶವನ್ನು ನೀಡುವುದಿಲ್ಲ. ಎಂದು ಮಾಹಿತಿ ಸಿಕ್ಕಿದೆ ಅದರಿಂದ ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬೇಕು ಅಂತವರು ನೇರವಾಗಿ ನೀವೇ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವ ಸ್ಥಳಕ್ಕೆ ಹೋಗುವುದು ಉತ್ತಮ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕುವ ಮುನ್ನ ನಿಮಗೆ ತಿಳಿದಿರಬೇಕಾದ ವಿಷಯಗಳು
ಹೊಸ ರೇಷನ್ ಕಾರ್ಡ್ ಅಂದಿದ್ದ ತಕ್ಷಣ ಎಲ್ಲರೂ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಪ್ರಯತ್ನಿಸುತ್ತೀರಾ ಇದರಲ್ಲಿ ನೀವು ಯೋಚನೆ ಮಾಡುವ ವಿಷಯ ಕಡಿಮೆಯಾಗಿದೆ ಏಕೆಂದರೆ ಎಲ್ಲರಿಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವ ಅವಕಾಶವನ್ನು ಸರ್ಕಾರದಿಂದ ಕೊಡುವುದಿಲ್ಲ ಏನಿಲ್ಲ ಅಗತ್ಯಗಳು ಮತ್ತು ಏನೆಲ್ಲಾ ಷರತ್ತುಗಳು ಇದೆ ಎಂದು ತಿಳಿದುಕೊಳ್ಳಬೇಕು.

ಏನೆಲ್ಲಾ ಷರತ್ತುಗಳು ಇದೆ
1 ಹೊಸ ರೇಷನ್ ಕಾರ್ಡಿಗೆ (New ration card) ಅರ್ಜಿ ಹಾಕುವ ಮುನ್ನ ನೀವು ಯಾವುದೇ ಒಂದು ರೇಷನ್ ಕಾರ್ಡ್ ನಲ್ಲಿ ಇರಬಾರದು.
2 ಹೊಸದಾಗಿ ಮದುವೆ ಮಾಡಿರುವವರು ಹಾಗೂ ವೈದ್ಯಕೀಯ ಕಾರಣಗಳಿಂದ (medical purpose) ರೇಷನ್ ಕಾರ್ಡ್ ಗಾಗಿ ಕಾಯುತ್ತಿರುವವರು ಈ ಒಂದು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಿಕೊಳ್ಳಬಹುದು.
3 ಎರಡು ಕುಟುಂಬಗಳು ಒಂದೇ ರೇಷನ್ ಕಾರ್ಡ್ ನಲ್ಲಿ ಇದೆ ಅದನ್ನು ಬೇರೆ ಬೇರೆಯಾಗಿ ಎರಡು ಹೊಸ ರೇಷನ್ ಕಾರ್ಡ್ ಮಾಡಿ ಕೊಡಬೇಕು ಎಂದರೆ ಈಗ ಆಗುವುದಿಲ್ಲ.
4 ನೀವು ಬೇರೆ ರೇಷನ್ ಕಾರ್ಡ್ ನಲ್ಲಿ ಇದ್ದರೆ ಇದಕ್ಕಿಂತ ಮುಂಚೆನೇ ರೇಷನ್ ಕಾರ್ಡ್ ತಿದ್ದುಪಡಿಯ ಸ್ಕೀಮ್ನಲ್ಲಿ ಡಿಲೀಟ್ ಆಗಿರಬೇಕು.
5 ರೇಷನ್ ಕಾರ್ಡ್ ನಲ್ಲೂ ಇಲ್ಲದೆ ರೇಷನ್ ಪಡಿತರ ಪಡೆದುಕೊಳ್ಳದೆ ಇರುವವರಿಗೆ ಮಾತ್ರ ಈ ಒಂದು ಹೊಸ ರೇಷನ್ ಕಾರ್ಡ್ ಮಾಡಲು ಸರ್ಕಾರದಿಂದ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವ ದಿನಾಂಕ
ಸ್ನೇಹಿತರೆ ಅಳುವರು ಹೊಸ ರೇಷನ್ ಕಾರ್ಡಿಗೆ ಕಾಯುತ್ತಿದ್ದೀರಾ ಈ ಜನವರಿ ತಿಂಗಳು 2025 ಪೂರ್ತಿಯಾಗಿ ಕೂಡ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ಮಾಡಿದೆ, ಅದರ ಜೊತೆಯಲ್ಲಿ ಜನವರಿ 23 2025 ಮಧ್ಯಾಹ್ನ 3 ಗಂಟೆಯಿಂದ ಸಂಜೆ 5:00 ವರೆಗೆ ಹೊಸ ರೇಷನ್ ಕಾರ್ಡಿಗೆ (New ration card) ಅರ್ಜಿ ಹಾಕಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ.
ಅರ್ಜಿ ಹಾಕಲು ಎಲ್ಲಿ ಹೋಗಬೇಕು?
ಆದ್ದರಿಂದ ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕಾಯುತ್ತಿದ್ದೀರಾ ಅಂತವರು ನಿಮ್ಮ ಹತ್ತಿರದ ಗ್ರಾಮ ಒನ್ ಕರ್ನಾಟಕ ಒನ್ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ.
ಇದೇ ತರದ ಎಲ್ಲಾ ಸರ್ಕಾರದ ಯೋಜನೆಗಳು ಹಾಗೂ ಪ್ರಯೋಜನಕರವಾದ ಮಾಹಿತಿಗಳಿಗಾಗಿ ನಮ್ಮ ಇನ್ಫೋಟೆಕ್ ವೆಬ್ಸೈಟ್ಗೆ ಭೇಟಿ ನೀಡಿ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಧನ್ಯವಾದಗಳು